ರೋಲ್ಸ್ ರಾಯ್ ಕಾರು,5 ಕೆಜಿ ಚಿನ್ನದ ಜೊತೆ 70ರ ಅಜ್ಜ ಫ್ರೀ.! 20ರ ಸುಂದರಿ ಮದುವೆಯಾದ 70 ರ ಮುದುಕ.!
ಸೌದಿ ಅರೇಬಿಯಾದಲ್ಲಿ 70 ವರ್ಷದ ವೃದ್ಧರೊಬ್ಬರು 20 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಯುವತಿಯನ್ನು ಒಪ್ಪಿಸಲು, ವರನು ರೋಲ್ಸ್ ರಾಯ್ಸ್ ಕಾರು ಮತ್ತು 5 ಕೆ. ಜಿ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು, ಈ ಸುದ್ದಿ ವೈರಲ್ ಆಗಿದೆ. ಇಂದು ಎಷ್ಟೋ ಗಂಡುಮಕ್ಕಳು ಹೆಣ್ಣೇ ಸಿಕ್ತಿಲ್ಲ ಎಂದು ಗೋಳೋ ಎನ್ನುತ್ತಿದ್ದಾರೆ...
news.ashwasurya.in
ಅಶ್ವಸೂರ್ಯ/ ಸೌದಿ ಅರೇಬಿಯಾ : ಸೌದಿ ಅರೇಬಿಯಾದಲ್ಲಿ 70 ವರ್ಷದ ವೃದ್ಧರೊಬ್ಬರು 20 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಯುವತಿಯನ್ನು ಒಪ್ಪಿಸಲು, ವರ ವೃದ್ಧ ರೋಲ್ಸ್ ರಾಯ್ಸ್ ಕಾರು ಮತ್ತು 5 ಕೆ.ಜಿ ಚಿನ್ನವನ್ನು ವಧುವಿಗೆ ಉಡುಗೊರೆಯಾಗಿ ನೀಡಿದ್ದು, ಈ ಸುದ್ದಿ ವೈರಲ್ ಆಗಿದೆ.
ಇಂದು ಎಷ್ಟೋ ಗಂಡುಮಕ್ಕಳು ಹೆಣ್ಣೇ ಸಿಕ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ಇಂದಿನ ಬಹುತೇಕ ಹೆಣ್ಣುಮಕ್ಕಳ ಡಿಮಾಂಡ್ ಕೇಳಿ ಗಂಡುಮಕ್ಕಳು ಮದ್ವೆನೇ ಬೇಡ ಎಂದು ಹೇಳುತ್ತಿದ್ದರೆ,

ಮತ್ತೆ ಕೆಲವು ಗಂಡುಮಕ್ಕಳು ಲಕ್ಷ ಲಕ್ಷ ದುಡಿದರೂ, ಸುರಸುಂದರ ಆಗಿದ್ರೂ ಯಾಕೋ ಮದುವೆಗೆ ಕಂಕಣ ಭಾಗ್ಯ ಕೂಡಿ ಬರುವುದೇ ಇಲ್ಲ. ಅದಕ್ಕೇ ಹೇಳೋದು ಮದುವೆ ಸ್ವರ್ಗದಲ್ಲಿಯೇ ಆಗಿರತ್ತೊ ಅಂತ. ಆದರೆ ಕೆಲವು ಗಂಡಸರಿಗೆ ಮಾತ್ರ ಒಂದಲ್ಲ, ಸ್ವರ್ಗದಲ್ಲಿಯೇ ನಾಲ್ಕೈದು ಮದುವೆನೂ ಆಗಿರುತ್ತೋ ಅನ್ನೊದಿಕ್ಕೆ ಈ ವೃದ್ಧನ ಮದುವೆ ಸಾಕ್ಷಿಯಾಗಿದೆ.

ಅಜ್ಜನ ಮದುವೆ :
ಅದಕ್ಕಿಂತಲೂ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಇಲ್ಲಿ ವರನಿಗೆ 70 ವರ್ಷ, ವಧುವಿಗೆ 20 ವರ್ಷ. ಕೆಲ ದಿನಗಳ ಹಿಂದಷ್ಟೇ ಇಂಥದ್ದೊಂದು ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದ ಕೈಲಾ ಭಟ್ಟ ಪ್ರದೇಶದಲ್ಲಿ ನಡೆದಿತ್ತು. ಸಮಾಜವಾದಿ ಪಕ್ಷದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಹಾಜಿ ಖಲೀಲ್ ಅವರ ನಾಲ್ಕನೇ ಮದುವೆಯ ಬಗ್ಗೆ ಇದೀಗ ಭಾರಿ ವಿವಾದ ಸೃಷ್ಟಿಸಿತ್ತು. ಹಾಜಿ ಖಲೀಲ್ ಅವರ ಎರಡನೇ ಪತ್ನಿ ನಜ್ರೀನ್ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿರುವ ಕಾರಣ ವಿಷಯ ಬೆಳಕಿಗೆ ಬಂದಿತ್ತು.

20ರ ಚೆಲುವೆ ಮದುವೆಯಾಗಿರುವ 70 ಮುದುಕನ ಮದುವೆಗೆ ಸಂಭವಿಸಿದಂತೆ ಯಾರೂ ದೂರು ಕೊಡಲಿಲ್ಲ.ಕಾರಣ ಇದು ನಡೆದಿರುವುದು ಸೌದಿ ಅರೇಬಿಯಾದಲ್ಲಿ. ಹಕೀಮ್ ಬಾಬರ್ ಜಿಯಾ ಎಂಬ 70 ವರ್ಷದ ಅಜ್ಜನ ಮದುವೆ ಮೊಮ್ಮಗಳ ವಯಸ್ಸಿನ ಅರ್ಥಾತ್ 20ರ ಚೆಲುವೆಯ ಜೊತೆ ಆಗಿದೆ. ಹಾಗೆಂದು ಆಕೆ ಏನೂ ಈ ಮದುವೆಗೆ ಸುಮ್ಮನೇ ಒಪ್ಪಿಕೊಳ್ಳಲಿಲ್ಲ ಬಿಡಿ. ಹಕೀಮ್ ಬಾಬಾ ಈಕೆಗೆ ರೋಲ್ಸ್ ರಾಯ್ಸ್ ಕಾರಿನ ಜೊತೆ 5 ಕೆ.ಜಿ ಚಿನ್ನ ಗಿಫ್ಟ್ ಕೊಟ್ಟಿದ್ದಾನಂತೆ. ಅದಕ್ಕಾಗಿ ಮದುವೆಯಾಗಿದ್ದು ಮಾತ್ರ ಕಾರಿನ ಜೊತೆನೋ ಅಥವಾ ಅಜ್ಜನ ಜೊತೆಗೊ ಅನ್ನೋದು ಡೌಟ್ ಆಗಿದೆ. ಅದೇನೇ ಆದ್ರೂ, ಇದರ ಸುದ್ದಿ ವೈರಲ್ ಆಗುತ್ತಲೇ ಸಾಕಷ್ಟು ಯುವಕರಂತೂ ಹೊಟ್ಟೆ ಉರಿಸಿಕೊಂಡಿರುವುದು ನಿಜ.


