ಕೋಲಾರ : ರೌಡಿಯಿಂದ ಹಫ್ತಾ ವಸೂಲಿ ಆರೋಪ.!ಆರೋಪಿಯನ್ನು ಹೊತ್ತೊಯ್ದು ಬಂಧಿಸಿದ ಪೊಲೀಸರು.!
ಚರ್ಚ್‌ನಲ್ಲಿ ಮಗಳ ಮದುವೆ ಸಂಭ್ರಮದಲ್ಲಿದ್ದ ಈತನನ್ನು ಪೊಲೀಸರು ಹೊತ್ತೊಯ್ದಿರುವ ದೃಶ್ಯ ಈಗ ವೈರಲ್ ಆಗಿದೆ. ತನಗೆ ಹೆದರಿಸಿ, ಬೆದರಿಕೆ ಹಾಕಿ ತನ್ನ ಮಗಳ ಮದುವೆಗೆ ಹಣ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಸಂತ್ರಸ್ತ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು.ಈಗಾಗಲೇ ನಗರದಿಂದ ಗಡಿಪಾರು ಆಗಿದ್ದರೂ ಕಾನೂನು ಉಲ್ಲಂಘಿಸಿ ನಗರದೊಳಗೆ ಪ್ರವೇಶಿಸಿದ್ದಲ್ಲದೆ, ಸಾರ್ವಜನಿಕರಿಗೆ ಹಣ ವಸೂಲಿಗಾಗಿ ಕಿರುಕುಳ ನೀಡಿದ ದೂರಿನ ಹಿನ್ನೆಲೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ….

news.ashwasurya.in
ಅಶ್ವಸೂರ್ಯ/ಕೋಲಾರ: ಮಗಳ ಮದುವೆಯ ಖರ್ಚಿಗಾಗಿ ಉದ್ಯಮಿಯೊಬ್ಬರಿಗೆ ಹೆದರಿಸಿ, ಬೆದರಿಕೆಯೊಡ್ಡಿ ಹಣ ವಸೂಲಿ ಮಾಡಿರುವ ಅರೋಪದ ಮೇಲೆ ಈಗಾಗಲೇ ಗಡಿಪಾರಾಗಿದ್ದ ರೌಡಿಶೀಟರ್‌ನನ್ನು ಪೊಲೀಸರು ಸಿನಿಮೀಯ ಶೈಲಿಯ ಕಾರ್ಯಚರಣೆ ಮಾಡಿ ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕೆಜಿಎಫ್ ನಗರದ ಸುಸೈಪಾಳ್ಯಂ ಏರಿಯಾದ ನಿವಾಸಿ, ಕುಖ್ಯಾತ ರೌಡಿಶೀಟರ್ ಸ್ಟಾನ್ಲಿ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಚರ್ಚ್‌ನಲ್ಲಿ ಮಗಳ ಮದುವೆ ಸಂಭ್ರಮದಲ್ಲಿದ್ದ ಈತನನ್ನು ಪೊಲೀಸರು ಹೊತ್ತೊಯ್ದಿರುವ ದೃಶ್ಯ ಈಗ ವೈರಲ್ ಆಗಿದೆ. ತನಗೆ ಹೆದರಿಸಿ, ಬೆದರಿಕೆ ಹಾಕಿ ತನ್ನ ಮಗಳ ಮದುವೆಗೆ ಹಣ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಸಂತ್ರಸ್ತ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು.
ಈಗಾಗಲೇ ನಗರದಿಂದ ಗಡಿಪಾರು ಆಗಿದ್ದರೂ ಕಾನೂನು ಉಲ್ಲಂಘಿಸಿ ನಗರದೊಳಗೆ ಪ್ರವೇಶಿಸಿದ್ದಲ್ಲದೆ, ಸಾರ್ವಜನಿಕರಿಗೆ ಹಣ ವಸೂಲಿಗಾಗಿ ಕಿರುಕುಳ ನೀಡಿದ ದೂರಿನ ಹಿನ್ನೆಲೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರ ಖಡಕ್ ಸೂಚನೆ ಮೇರೆಗೆ ಕಾರ್ಯಾಚರಣೆಗೆ ಇಳಿದು ಆಂಡರ್ಸನ್‌ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ, ಸುಸೈಪಾಳ್ಯಂ ಚರ್ಚ್‌ನಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ನುಗ್ಗಿದ್ದಾರೆ. ಮದುವೆ ಮಂಟಪದಲ್ಲಿದ್ದ ಆರೋಪಿ ಸ್ಟಾನ್ಲಿಯನ್ನು ಸಿನಿಮೀಯ ಶೈಲಿಯಲ್ಲಿ ಎಳೆದೊಯ್ದು ಬಂಧಿಸಿದ್ದಾರೆ..


