ಡಿಎಮ್ಕೆ – ಎಐಎಡಿಎಮ್ಕೆ ಸೇರಿ ಸರ್ಕಾರ ರಚಿಸಿದರೆ ಟಿವಿಕೆಯ 107 ಶಾಸಕರು ಸಾಮೂಹಿಕ ರಾಜೀನಾಮೆ: ವಿಜಯ್, ಟಿವಿಕೆ ಪಕ್ಷದ ಮುಖ್ಯಸ್ಥ.
news.ashwasurya. in
ಅಶ್ವಸೂರ್ಯ/ತಮಿಳುನಾಡು : ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಗ್ಗೆ ಇರುವ ನಡುವೆ ವಿಜಯ್ ಅವರ ಪಕ್ಷವಾದ ಟಿವಿಕೆ ಗಂಭೀರ ಎಚ್ಚರಿಕೆ ಕೊಟ್ಟಿದೆ. ರಾಜ್ಯದಲ್ಲಿ ಡಿಎಂಕೆ-ಎಐಎಡಿಎಂಕೆ ಸರ್ಕಾರ ರಚನೆಯಾದರೆ, ಎಲ್ಲಾ ಟಿವಿಕೆ ಶಾಸಕರು ಸಾಮೂಹಿಕ ರಾಜೀನಾಮೆ ನೀಡುತ್ತಾರೆ ಎಂದು ವಿಜಯ್ ಹೇಳಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಗ್ಗೆ ಇನ್ನೂ ನಿಗೂಢ ಆಗಿರುವುದರಿಂದ ವಿಜಯ್ ಅವರ ಪಕ್ಷವಾದ ಟಿವಿಕೆ ಗಂಭೀರವಾದ ಎಚ್ಚರಿಕೆ ನೀಡಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷವಾದ ಟಿವಿಕೆ ಅತಿ ಹೆಚ್ಚು ಸ್ಥಾನಗಳನ್ನು (108) ಗೆದ್ದಿದೆ ಎಂಬುದನ್ನು ಗಮನಿಸಬೇಕು. ಇದರ ಹೊರತಾಗಿಯೂ, ಸರ್ಕಾರ ರಚಿಸಲು ಆಹ್ವಾನ ಬಂದಿಲ್ಲ. ರಾಜ್ಯಪಾಲರು ಎರಡು ಬಾರಿ ವಿಜಯ್ ಅವರನ್ನು ಬರಿಗೈಯಲ್ಲಿ ಕಳುಹಿಸಿದರು. ಬಹುಮತಕ್ಕೆ ಅಗತ್ಯವಿರುವ 118 ಶಾಸಕರ ಬೆಂಬಲವನ್ನು ಪ್ರದರ್ಶಿಸಲು ಟಿವಿಕೆ ಮುಖ್ಯಸ್ಥರನ್ನು ಕೇಳಲಾಯಿತು ಎಂದು ತಿಳಿದುಬಂದಿದೆ.

